ಮಧುಗಿರಿ ತಾಲೂಕಿನ ಚಂದ್ರಗಿರಿ ಗ್ರಾಮದಲ್ಲಿ ದಾಖಲೆ ಮಳೆ.
ಮಧುಗಿರಿ - ತಾಲೂಕಿನ ಬಡವನಹಳ್ಳಿ ಹೋಬಳಿಯ ಚಂದ್ರಗಿರಿ ಗ್ರಾಮದಲ್ಲಿ ಅಕ್ಟೋಬರ್ 19ರಂದು 146 ಮಿ ಮೀ ಮಳೆಯಾಗುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬಿದ್ದಿರುವ ಪ್ರದೇಶವಾಗಿ ದಾಖಲೆ ಮಾಡಿದೆ. 
ಶಾಶ್ವತ ಬರಪಿಡಿತ ಪ್ರದೇಶ ಎಂದು ಗುರುತಿಸಿಕೊಂಡಿರುವ ಮಧುಗಿರಿ ತಾಲೂಕಿನಲ್ಲಿ 147 ಮಿ ಮೀ ಮಳೆಯಾಗಿ ದಾಖಲೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಇನ್ನು ಎರಡನೇ ಸ್ಥಾನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಆನೆಗೆರೆ ಗ್ರಾಮದಲ್ಲಿ 137.5 ಮಿ ಮೀ ಹಾಗೂ ಮಧುಗಿರಿ ತಾಲೂಕಿನ ಬಡವನಹಳ್ಳಿ ಗ್ರಾಮದಲ್ಲಿ 133 ಮಿ ಮೀ ಮಳೆ ಬಿದ್ದಿರುವುದು ದಾಖಲಾಗಿದೆ.